KSRTC: ರಸ್ತೆ ಬದಿ ನಿಂತಿದ್ದ ಬಸ್ ಗೆ ಡಿಕ್ಕಿ, ಗಾಯಾಳುಗಳು ಆಸ್ಪತ್ರೆಗೆ ದಾಖಲುKSRTC: ರಸ್ತೆ ಬದಿ ನಿಂತಿದ್ದ ಬಸ್ ಗೆ ಡಿಕ್ಕಿ, ಗಾಯಾಳುಗಳು ಆಸ್ಪತ್ರೆಗೆ ದಾಖಲು
Spread The Love

ಕೊಪ್ಪಳ:- ನಿನ್ನೆ ಸಂಜೆ ರಸ್ತೆ ಬದಿ ನಿಂತಿದ್ದ ಕೆಎಸ್‌ಆರ್‌ಟಿಸಿ (KSRTC) ಸಾರಿಗೆ ಬಸ್‌ಗೆ ಚುನಾವಣಾ ವೀಕ್ಷಕರನ್ನು ಕರೆದೊಯ್ಯುತ್ತಿದ್ದ ವಾಹನ ಡಿಕ್ಕಿ ಹೊಡೆದಿರುವ ಘಟನೆ ಗಂಗಾವತಿ ತಾಲೂಕಿನ ವಿದ್ಯಾನಗರದಲ್ಲಿ ನಡೆದಿದೆ.

ಕೆಎಸ್‌ಆರ್‌ಟಿಸಿ ಸಾರಿಗೆ ಡಿಕ್ಕಿ ರಭಸಕ್ಕೆ  ಚುನಾವಣಾ ವೀಕ್ಷಕರ ಜೀಪ್ ಸಂಪೂರ್ಣ ಜಖಂಗೊಂಡಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರಣ ಅಪಘಾತ ಸಂಭವಿಸಿದೆ. ಶಿವಾನಂದ ಅವರ ಚುನಾವಣಾ ವೀಕ್ಷಕರ ವಾಹನದ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಪೊಲೀಸ್ ಅಧಿಕಾರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನು ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನು ಓದಿ: KSRTC ಯಿಂದ 2275 ವಿಶೇಷ ಬಸ್ ವ್ಯವಸ್ಥೆ | ಯುಗಾದಿ, ರಂಜಾನ್‍ಗೆ ಹಬ್ಬಕ್ಕೆ ರಜೆಗಳ ಸುರಿಮಳೆ.

ನಿನ್ನೆ ಸಂಜೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಿದ್ಯಾನಗರದಲ್ಲಿ ಈ ಘಟನೆ ನಡೆದಿದೆ. ಮೀನುಗಾರಿಕೆ ಇಲಾಖೆ ವಾಹನ ಇದಾಗಿದ್ದು, ಗಂಗಾವತಿ ಗ್ರಾಮಾಂತರ ಪೊಲೀಸ್ ಠಾಣೆ ಬಳಿ ಘಟನೆ ನಡೆದಿದ್ದು, ಮಾಹಿತಿ ಪಡೆದು ಗಂಗಾವತಿ ತಹಸೀಲ್ದಾರ್ ಯು.ನಾಗರಾಜ್ ಆಸ್ಪತ್ರೆಗೆ ಧಾವಿಸಿದ್ದಾರೆ.

By navakarnatakatimes

NKT (Navakarnataka Times) News Kannada is a news and media company based in Vijayapura, Belgaum Karnataka. Its registration with the Government of India

Leave a Reply

Your email address will not be published. Required fields are marked *