Spread The Love

ಚಿಕ್ಕವನಿದ್ದಾಗ ನನ್ನ ಜನ್ಮ ದಿನದ ನೆನಪಿಗಾಗಿ ಅಜ್ಜನೊಂದಿಗೆ ಒಂದು ಮರ ನೆಟ್ಟು ಅದು ಇಂದು ಹೆಮ್ಮರವಾಗಿ ಬೆಳದು ನಂತರ ದುಡ್ಡೀನ ಆಸೆಗಾಗಿ ಅದನ್ನು ನಾನೆ ಬಲಿ ಕೊಟ್ಟೆ. ಹೌದು ಚೀಕ್ಕವನಿದ್ದಾಗ ನನ್ನ ಜನ್ಮದಿನದ ನೀಮಿತ್ಯ ಅಜ್ಜನನ್ನು ಕಾಡಿ ಬೇಡಿ ಒಂದು ಸಸಿಯನ್ನು ನೆಟ್ಟು ಅದಕ್ಕೆ ನೀರು ಉಣಿಸಿ ಹೆಮ್ಮರವಾಗಿ ಬೆಳೆಸಿದೆವು. ಹಚ್ಚ ಹಸಿರಾಗಿ ಕಾಣುವ ಮರಗಳು ಎಷ್ಟು ಪ್ರಾಣಿ ಪಕ್ಷಿಗಳಿಗೆ ಆಸರೆ ಆಗಿತ್ತು. ಬಿಸಿಲಿನಲ್ಲಿ ದಣಿದು ಬಂದವರಿಗೆ ನೆರಳು ಕೊಡುತ್ತಿದ್ದವು, ಹೆಸಿದ್ದು ಬಂದ ಜೀವಿಗಳಿಗೆ ಹಣ್ಣು ಹಂಪಲ ಕೊಟ್ಟು ತಣಿಸುತ್ತಿತ್ತು.
ಆದರೆ ಇಂದು ಹಣದ ಆಶೆಗಾಗಿ ಬೇರೆವರಿಗೆ ಮಾರಿ ಬಿಟ್ಟೆ. ನನ್ನ ಕಣ್ಣು ಮುಂದೆ ನೆಲ ಸಮವಾಗಿ ಹೋದವು ಅದರಲ್ಲಿ ಆಸರೆ ಪಡೆದ ಎಷ್ಟು ಪಕ್ಷಿಗಳು ರಕ್ತಸಂಬAದಿವನ್ನು ಕಳೆದುಕೊಂಡು ಕಂಗಾಲವಾಗಿ ಹಾರಾಡುತ್ತಿದವು. ಚಚ್ಚು ಹಸರಾಗಿ ಕಾಣುವ ಭೂಮಿ ಇಂದು ಬರಡು ಭೂಮಿ ಆಗಿ ಮಾರಪಟ್ಟಿತ್ತು. ಅಜ್ಜನ ನೆನಪು ಇದೆ ಭೂಮಿಯಲ್ಲಿ ನೆಲಸಮಾದಿವಾಗಿ ಹೊಹಿತ್ತು.


ಹಣದ ವ್ಯಾಮೂಹಕ್ಕೆ ಗಿಡಮುಲಿಕೆಗಳ ತಾಣವಾಗಿದ ಪ್ರೀತಿಯಿಂದ ಬೆಳೆಸಿದ ಅಜ್ಜನ ಎಲ್ಲ ಗಿಡಗಳನ್ನು ವ್ಯಾಪಾರಸ್ಥರಿಗೆ ಮಾರಿ ಬಿಟ್ಟೆ. ಆ ಸ್ಥಳದಲ್ಲಿ ದೊಡ್ಡ ಗಾತ್ರದ ಮಾಲ್‌ಗಳು, ಸುಂದರ ಪಾರ್ಕಗಳು, ನಿರ್ಮಾಣ ಮಾಡಿದೆ. ಕೋಟಿ ಕೋಟಿ ಹಣದ ಒಡೆಯನಾದೆ ಸುತ್ತಲೂ ಕಪ್ಪು ಹೊಗೆ ಆವರಿಸಿಕೊಂಡಿದೆ. ಪ್ರಾಣಿ ಪಕ್ಷಿಗಳು ನೆಲೆಸಲು ಸೂಕ್ತ ಸ್ಥಳವನ್ನು ಹುಡುಕಿಕೊಂಡು ದೇಶ ಬಿಟ್ಟು ಪಲಾಯನ ಮಾಡುತ್ತಿವೆ.
ಮನಸ್ಸಿಗೆ ನೆಮ್ಮದಿ ಇಲ್ಲಾ ಸಂತೋಷವು ವಿಲ್ಲ, ಮನವು ಭಾರವಾಗಿತ್ತು ಈ ಸ್ಥಳದಲ್ಲಿ ಇರಲು ಮನಸ್ಸು ನಿರಾಕರಿಸುತ್ತಿತ್ತು. ಅಜ್ಜನ ನೇನಪುಗಳ ಜೋತೆಗೆ ಚಿಕ್ಕ ಸಸಿಗಳನ್ನು ನೆಟ್ಟು ಬೆಳಸಿದ ಸವಿ-ಸವಿ ನೇನಪು ಕಾಡತೊಡಗಿತು. ಇಲ್ಲಿಂದ ದೂರ ಹೋಗಿ ವಾಸಮಾಡಬೇಕೆಂದು ನಿರ್ದರಿಸಿದೆ.
ನಾನು ವಿಜಯಪುರನಿಂದ ಬಸ್ಸಲ್ಲಿ ಪ್ರಯಾಣ ಬೆಳಿಸಿದೆ ಮನಸ್ಸು ಘಾಯವಾಗಿತ್ತು, ಕಿವಿಯಲ್ಲಿ ಗಿಡಗಳು ಅಳುವ ಆಕ್ರಂದನ, ಪ್ರಾಣಿ-ಪಕ್ಷಿಗಳ ರಂಪಾಟ ಪಿಸುಗುಡುತ್ತಿತ್ತು. ಕಿಟಕಿಯಿಂದ ತಂಗಾಳಿ(nature is beautiful) ಬಿಸುತ್ತಿತ್ತು ಸಣ್ಣನೆ ಚಳಿಗೆ ಮೈ ಮುದುಡುತ್ತಿತ್ತು. ಆಯಾಸವಾದ ಮನಸ್ಸು ಬೆಗನೆ ಚಿರುನದ್ರೆಗೆ ಜಾರಿತು.
ಬೇಕೆ ಬೇಕು ನ್ಯಾಯಾ ಬೇಕು, ದಿಕ್ಕಾರ ವರುಣ ಸ್ನೇಹಿತನನ್ನು ಕೊಂದವನಿಗೆ ದಿಕ್ಕಾರ ಎಂಬ ಕೊಗು ಎಲ್ಲಡೆ ಹರಡಿತ್ತು ಭಯದಿಂದ ಅತ್ತ ಇತ್ತಕಡೆ ನೋಡತೊಡಗಿದೆ ಸುತ್ತಲೂ ಮರಗಳು ಗುಂಪುಗಟ್ಟಿ ನಿಂತಿವೆ. ಈ ನಿಮ್ಮ ಬಸ್ಸಿನಲ್ಲಿ ವರುಣನ ಆತ್ಮ ಗೇಳೆಯನನ್ನು ಕೊಂದ ಪಾಪಿ ಇದ್ದಾನೆ ಅವನನ್ನು ಇಳಿಸಿ ಇಲ್ಲಾದರೆ ಪ್ರತಿಭಟನೆಯು ಕ್ರೂರರುಪ ತಾಳುತ್ತದೆ. ಆಗ ಕಂಡೆಕ್ಟರ ನಮ್ಮ ಬಸ್ಸಿನಲ್ಲಿ ಇರುವ ಆ ಪಾಪಿ ಯಾರು ಬೇಗನೆ ಕೆಳಗೆ ಇಳಿಯಿರಿ ಎಂದನು ಆಗ ಬಸ್ಸಿನಲ್ಲಿ ಇದ್ದ ಎಲ್ಲ ಜನರು ನಾನು ಅಲ್ಲ ನಾನು ಅಲ್ಲ ಎಂದು ಎಲ್ಲರದು ಒಂದೆ ಸ್ವರ. ಆಗ ಎಲ್ಲರು ನನ್ನ ಕಡೆ ನೋಡ ತೊಡಗಿದರು ನಾನಲ್ಲ ನಾನಲ್ಲ ಎಂದೆ ಆಗ ಪಕ್ಕದಲ್ಲಿ ಇದ್ದ ಹತ್ತಿಯ ಮರವು ಆಕ್ರೋಶದಿಂದ ಈ ನೀಚ ವ್ಯಕ್ತಿನೆ ನಮ್ಮ ಸಂಬAದಿಕರನ್ನು ಕೊಂದಿದ್ದು ಎಂದು ದಿಕ್ಕಾರ ಹಾಕಲು ಆರಂಭಿಸಿತು ಇವನು ಪಾಪಿ ಪಾಪಿ ಕೊಂದುಬಿಡಿ ಎಂಬ ಕೂಗು ಎಲ್ಲಾಕಡೆಯಿಂದ ಬರುತ್ತಿತ್ತು. ಬೇವಿನ ಮರವು ಶಿಕ್ಷೆ ಘೋಷಣೆ ಮಾಡಿ ಎಲ್ಲರು ತಮ್ಮ ತಮ್ಮ ಆಮ್ಲಜನಕವನ್ನು ಹೊರ ಸೂಸುವದನ್ನು ನಿಲ್ಲಿಸಿ ಎಂದು ಆಜ್ಞೆ ಮಾಡಿತು. ಆಗ ನನಗೆ ಉಸಿರಾಟದ ತೊಂದರೆ ಆರಂಭವಾಯಿತು ಕತ್ತು ಯಾರೋ ಹಿಚುಕಿದಂತೆ ಬಾಸವಾಯಿತು.
ಓಮ್ಮೇಲೆ ಎಚ್ಚರವಾಯಿತು ಮೈಯಲ್ಲಾ ಬೇವರಿತ್ತು ಬಸ್ಸು ಸರಾಗವಾಗಿ ಸಾಗುತ್ತಿತ್ತು, ಕಿಟಕಿಯಿಂದ ಹೊರನೋಟ ಬಿಸಿದೆ ಯಾವ ಒಂದು ಗಿಡವು ಕಣ್ಣೀಗೆ ಕಾಣಲಿಲ್ಲ ಎಲ್ಲವು ಬರಡುಭೂಮಿಯಂತೆ ಭಾಸವಾಗುತ್ತಿತ್ತು. ಅದು ಕಲ್ಪನೆ ನಾ ಎಂದು ನಿಟ್ಟು ಉಸಿರು ಬಿಟ್ಟೆ.

By navakarnatakatimes

NKT (Navakarnataka Times) News Kannada is a news and media company based in Vijayapura, Belgaum Karnataka. Its registration with the Government of India

One thought on “ಪ್ರಾಣಿ-ಪಕ್ಷಿಗಳ ರಂಪಾಟ ಪಿಸುಗುಡುತ್ತಿತ್ತು | Nuture Love”

Leave a Reply

Your email address will not be published. Required fields are marked *