Spread The Love

ನಗರಿಕರಣ ಮತ್ತು ವ್ಯಾಪಾರಿಕರಣದಿಂದ ಅರಣ್ಯ ನಶಿಸುತ್ತಿದೆ. ಎಲ್ಲಕಡೆಯು ವಾಯುಮಾಲಿನ್ಯ ಹೆಚ್ಚಾಗುತ್ತಿದ್ದು. ವಾತಾವರಣದಲ್ಲಿ ಏರುಪೆರಾಗುತ್ತಿದೆ ಇದರಿಂದಾಗಿ ಉಷ್ಣಾಂಶ ಹೆಚ್ಚಾಗುತ್ತಿದೆ. ಇದಕ್ಕೆಲ್ಲ ಕಾರಣ ಮಾನವನ ಐಶಾರಾಮಿ ಜೀವನ, ಮಾನವನು ಉಪಯೋಗಿಸುವಂತಹ ವಾಹನಗಳು ಬಿಡುವ ಇಂಗಾಲದ ಡ್ಯ ಆಕ್ಸಾಯಿಡ್ ಮತ್ತು ಪ್ರಿಜ್‌ಗಳು ಬಿಡುವ ಪ್ರೀಯಾನ್ಸ್ಗಳು ಇವುಗಳ ಅತಿಯಾದ ಬಳಿಕೆಯಿಂದ ಓಝೊನ್ ಪದರವು ಅಳುವಿನ ಅಂಚಿನಲ್ಲಿ ಇದೆ. ಜಾಹಿರಾತುದಾರರು ಮರಗಳನ್ನು ಬಳಿಸಿಕೊಂಡು ತಮ್ಮ ವ್ಯಾಪಾರ ವಿಸ್ತರಿಸುತ್ತಿದ್ದಾರೆ. ಮರದ ಮೇಲೆ ಜಾಹಿರಾತಿನ ಫಲಕಗಳನ್ನು ಅಳವಡಿಸಲು ಮೊಳೆಗಳನ್ನು ಹೂಡೆದು ಅಂಟಿಸುತ್ತಿದಾರೆ. ಇದರಿಂದಾಗಿ ಮರಗಳು ರೋಗ ಘೃಸ್ಥವಾಗಿ ಒಣಗಿ ಹೋಗುತ್ತಿವೆ. ಕಬ್ಬಿಣ ಮೊಳೆಯನ್ನು ಬಳಸುವದರಿಂದ ತುಕ್ಕುಹಿಡಿದು ಮರಗಳು ಬುಡ ಸಮೇತ ಒಣಗಿ ಹೋಗುತ್ತಿವೆ. ಇದರ ವಿರುದ್ಧ ಸರಕಾರವು ಸೂಕ್ತ ಕ್ರಮವನ್ನು ತೆಗೆದುಕೊಳ್ಳುವುದರ ಮೂಲಕ ಪರಿಸರ ರಕ್ಷಣೆಯತ್ತ ಗಮನ ಹರಿಸಬೇಕು.

  • Editor Page

By navakarnatakatimes

NKT (Navakarnataka Times) News Kannada is a news and media company based in Vijayapura, Belgaum Karnataka. Its registration with the Government of India

Leave a Reply

Your email address will not be published. Required fields are marked *